ಅಂಕಣಗಳು

Subscribe


 

ಕರ್ತರೀಮುಖ ಹಸ್ತ

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ : ತ್ರಿಪತಾಕ ಹಸ್ತದಲ್ಲಿನ ತೋರು ಬೆರಳನ್ನು ಮಧ್ಯಮ ಬೆರಳಿನ ಹಿಂಭಾಗದಲ್ಲಿ ಹಿಡಿದು ಹೆಬ್ಬೆರಳನ್ನು ಕಿರು ಮತ್ತು ಉಂಗುರ ಬೆರಳಿಗೆ ಮುಟ್ಟಿಸುವುದು. ಇದು ಕತ್ತರಿಯ ಮುಂಭಾಗದಂತೆ ಗೋಚರಿಸುತ್ತದೆ. ಲಾಸ್ಯರಂಜನದ ಕರ್ತರೀಮುಖಹಸ್ತಕ್ಕೂ, ಅಭಿನಯದರ್ಪಣದ ಹಸ್ತಕ್ಕೂ ಮಾಡುವ ವಿಧಾನದಲ್ಲಿ ವ್ಯತ್ಯಾಸವಿದ್ದು, ಅಭಿನಯದರ್ಪಣದಲ್ಲಿ, ಹೆಬ್ಬೆರಳನ್ನು ಕಿರು ಹಾಗು ಉಂಗುರ ಬೆರಳಿಗೆ ಮುಟ್ಟಿಸಲಾಗುತ್ತದೆ. ಅದೇ ಲಾಸ್ಯರಂಜನದಲ್ಲಿ ಈ ಹಸ್ತದ ಹೆಬ್ಬೆರಳು ಮುಟ್ಟಿಸಲ್ಪಡುವುದಿಲ್ಲ.

ಈ ಹಸ್ತವನ್ನು ದಿನನಿತ್ಯ ಜೀವನದಲ್ಲಿ ಕತ್ತರಿ, ಎರಡು ಎಂಬ ಸಂಖ್ಯೆ, ತುಂಡು ಮಾಡುವುದು ಎಂಬ ಭಾವಗಳಿಗೆ ಉಪಯೋಗಿಸಲಾಗುತ್ತಿದೆ.

ವಿನಿಯೋಗ : ಸ್ತ್ರೀ ಪುರುಷರನ್ನು ಬೇರ್ಪಡಿಸುವ ಭಾವ, ಇದು-ಅದು ಎಂದು ತರ್ಕ ಮಾಡುವುದು, ಲೂಟಿ, ಕಣ್ಣುಗಳ ಕುಡಿನೋಟ, ಸಾವು, ಭೇದಭಾವ, ಮಿಂಚು, ವಿರಹದಿಂದ ಒಂದೇ ಮಂಚದಲ್ಲಿ ಮಲಗುವುದು, ಪತನ, ಬಳ್ಳಿ.

ಇತರೆ ವಿನಿಯೋಗ : ವಿರುದ್ಧ, ಪ್ರತಿಕೂಲ, ವ್ಯತ್ಯಾಸ, ಕಾಲಿಗೆ ಅರಗಿನ ರಸವನ್ನು ಹಚ್ಚುವುದು, ಓಲೆ ಓದುವುದು, ಭೇದಿಸುವುದು, ಹಕ್ಕಿಗಳ ಕೊಕ್ಕು, ನಿಂದಿಸುವುದು, ಶೋಧಿಸುವುದು, ಹೃದಯವಿಕಾರ, ಹೆಚ್ಚು ಗದ್ದಲ, ಕಪಟ, ವೇಗ, ಸ್ತ್ರೀಯರು ತಲೆಸಿಕ್ಕು ಬಿಡಿಸುವುದು, ಕಿರಣ, ಥಳಕು, ಕಳ್ಳತನ, ಸ್ನೇಹ, ಭಂಗ, ಕೋಣ, ಜಿಂಕೆ, ಪರ್ವತ ಶಿಖರ, ಎತ್ತು, ಗರ್ವಭಂಗ, ನಿಂದೆ, ನೆಗೆದು ಧುಮುಕುವುದು, ಕತ್ತರಿ,ಅಡಿಕೆಯನ್ನು ಕತ್ತರಿಸುವುದು, ಮಕ್ಕಳು ಅಂಬೆಗಾಲಿಕ್ಕುವುದು, ದಾರಿನಡೆಯುವವನು, ಕೈಯನ್ನು ಮೇಲೆ ಮಾಡಿ ಕತ್ತರಿಸುವುದು, ಒಂದನ್ನು ಒಂದರ ಹಿಂದಿಡುತ್ತಾ ಮುಖಕ್ಕೆ ಕತ್ತರಿಯಿಂದ ಗಾಯ ಮಾಡುವುದು, ಮಕ್ಕಳು ತೆವಳುವುದು, ಕೊಂಬು, ಅಪರಾಧ, ಒತ್ತೆಯಿಡುವುದು, ದಾರಿತೋರಿಸುವುದರ ಸಂವಹನಕ್ಕೆ ಬಳಸಲಾಗುತ್ತದೆ.

ನಾನಾರ್ಥಹಸ್ತಗಳ ಪ್ರಕಾರದಲ್ಲಿ, ಕರ್ತರೀಮುಖ ಹಸ್ತವನ್ನು ಪುರೋಭಾಗದಲ್ಲಿ ಕಂಪಿಸುವಂತೆ ಮಾಡಿದರೆ ದ್ವೈಧೀಭಾವ (ರಾಜನೀತಿಯಲ್ಲಿ ಇಬ್ಬಗೆಯ ನೀತಿಯನ್ನು ಅನುಸರಿಸುವ ಗುಣ) ಎಂಬರ್ಥದಲ್ಲಿ ಉಪಯೋಗಿಸಬಹುದು.ಭರ್ತೃ-ಭಾರ್ತೃಹಸ್ತ (ಗಂಡ ಮತ್ತು ಸೋದರ) ದುಂಧುಭ ಎಂಬ ವಿಷಕಾರಿ-ಎರಡು ತಲೆಯುಳ್ಳ ಹಾವು ಮತ್ತು

ಹಿಂತಲ, ಶಮಿ, ಕುರುವಕ ಮುಂತಾದ ವೃಕ್ಷಗಳ ಸೂಚನೆಗಾಗಿ ಕರ್ತರೀಮುಖಹಸ್ತಗಳನ್ನು ಬಳಸುತ್ತಾರೆ.

Leave a Reply

*

code